ಬರಿದೆ ಹೋಯಿತು ಹೊತ್ತು.

ಬರಿದೆ ಹೋಯಿತು ಹೊತ್ತು.

( ರಾಗ ಬಿಲಹರಿ. ಅಟ ತಾಳ) ಬರಿದೆ ಹೋಯಿತು ಹೊತ್ತು ||ಪ|| ನರ ಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ ||ಅ|| ಆಸೆಯೆಬುದು ಎನ್ನ ಕ್ಲೇಶ ಪಡಿಸುತಿದೆ ಘಾಸಿಯಾದೆನೊ ಹರಿ ಶೇಷಶಾಯಿ ವಾಸುದೇವನೆ ನಿನ್ನ ಧ್ಯಾನವ ಮಾಡದೆ ನಾಶವಾಯಿತು ಜನ್ಮ ಮೋಸ ಹೋದೆನು ಕೃಷ್ಣ || ಸತಿಸುತರೆಂದೆಂಬ ಅತಿಭ್ರಾಂತಿಗೊಳಗಾಗಿ ಮತಿಹೀನನಾದೆನೊ ಚ್ಯುತಿದೂರನೆ ಸತತ ವಿಷಯದಿಂದ ಹತನಾದೆ ಮನವೆನ್ನ ಗತಿಗೆಡಿಸುತಿದೆ ಲಕ್ಷ್ಮೀಪತಿ ಸರ್ವೋತ್ತಮನೆ || ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ ಮರುಳುತನದಲಿ ಮತಿಹೀನನಾದೆ ನೆರೆ ನಂಬಿದೆನೊ ನಿನ್ನ ಕರುಣದಿಂದಲಿ ಎನ್ನ ಮರೆಯದೆ ಸಲಹಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು