ಬಂದ ನೋಡಿ ಗೋವಿಂದ ಕೃಷ್ಣ

ಬಂದ ನೋಡಿ ಗೋವಿಂದ ಕೃಷ್ಣ

( ರಾಗ ಫರಜು. ಆದಿ ತಾಳ) ಬಂದ ನೋಡಿ ಗೋವಿಂದ ಕೃಷ್ಣ ||ಪ|| ಬಂದ ಬಂದ ಆನಂದ ತೀರ್ಥ ಮು- ನೀಂದ್ರ ವಂದ್ಯ ಹರಿ ನಂದಮುಕುಂದನು ||ಅ|| ಸರಸಿಜಾಕ್ಷ ದೊರೆಯ ಸರ್ವರ ಪೊರೆವ ದಯಾನಿಧಿಯೆ ಕರಿಯ ವರನ ಚಕ್ರದಿ ಉದ್ಧರಿಸಿದ ಹರಿ ನಮ್ಮ ಪಾಲಿಪ ಪಾಲ್ಗಡಲೊಡೆಯನು ಇಂದ್ರದೇವ ವಂದ್ಯ ಇಷ್ಟರ ಇಂದು ಕಾವ್ಯ ನಿತ್ಯಾನಂದ ಚಂದ್ರ ಕೋಟಿ ಲಾವಣ್ಯ ಮುಖದಲಿ ಸುಂದರ ಅರಳೆಲೆ ಹಾರಗಳಿಂದಲಿ ಚರಣ ಕಮಲಕಾಂತೆ ಸರ್ವದಾ ಮಾಳ್ಪುದು ದಯವಂತೆ ತರತರ ಜನರಿಗೆ ಕರೆದು ವರವನೀವ ಸರಸಿಜಾಕ್ಷ ನಮ್ಮ ಪುರಂದರವಿಠಲನು
ದಾಸ ಸಾಹಿತ್ಯ ಪ್ರಕಾರ
ಬರೆದವರು