ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆ

ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆ

( ರಾಗ - ಭೈರವಿ( ಸಾರಂಗ) ಆದಿತಾಳ (ತ್ರಿತಾಳ) ) ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನೋ ಜಗದೊಳಗೆ , ಮುಖ್ಯ- ||ಪ|| ಪ್ರಾಣಾಪಾನವ್ಯಾನೋದಾನ ಸ- ಮಾನನೆನಿಪ ಮುಖ್ಯಪ್ರಾಣ ನೀನಲ್ಲದೆ ||ಅ.ಪ|| ವಾಸವ ಕುಲಿಶದಿ ಘಾಸಿಸೆ ಜೀವರ ಶ್ವಾಸ ನಿರೋಧಿಸಿದೆ ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವ ಮುಖ್ಯ- ||೧|| ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯನು ಪುಡುಕೆ ತಿಂಗಳು ಮೀರಲು ಕಪಿವರ- ಪುಂಗವ ಪಾಲಿಸಿದೆ ಮುಖ್ಯ- ||೨|| ಪಾವನ ಪಾಶದಿ ರಾವಣ ನೀಲ ಸು- ಗ್ರೀವ ಮುಖ್ಯರ ಬಿಗಿಯೆ ಸಾವಿರದೈವತ್ತು ಗಾವುದದಲ್ಲಿಹ ಸಂ- ಜೀವನವನು ತಂದೆ ಮುಖ್ಯ- ||೩|| ಪರಿಸರ ನೀನಿರೆ ಹರಿತಾನಿರುವನು ಇರದಿರೆ ತಾನಿರನು ಕರಣ ನಿಯಾಮಕ ಸುರರ ಗುರುವೇ ನೀ- ಕರುಣಿಸೆ ಕರುಣಿಸುವ ಮುಖ್ಯ- ||೪|| ಭೂತೇಂದ್ರಿಯ ದಧಿನಾಥ ನಿಯಾಮಕ ಆತೈಜಸ ಹರನ ತಾತನೆನಿಪ ಜಗನ್ನಾಥವಿಠ್ಠಲನ ಪ್ರೀತಿಪಾತ್ರನಾದೆ ಮುಖ್ಯ- ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು