ಪೊಂದಿ ಬದುಕಿರೋ ರಾಘವೇಂದ್ರರಾಯರ
ರಾ ಗ - ಸೌರಾಷ್ಟ್ರ : ತಾ ಳ - ಆ ದಿ ತಾ ಳ
ಪೊಂದಿ ಬದುಕಿರೋ ರಾಘವೇಂದ್ರರಾಯರ |
ಕುಂದದೆಮ್ಮನು ಕರುಣದಿಂದ ಪೊರೆವರ | ಪ |
ನಂಬಿ ತುತಿಸುವ ಜನಕದಂಬಕಿಷ್ಟವ |
ತುಂಬಿಕೊಡುವನು ಅನ್ಯರ ಹಂಬಲೀಯನು | ೧ |
ಅಲವಬೋಧರ ಸುಮತ ಜಲಧಿಚಂದಿರ |
ಒಲಿದು ಭಕ್ತರ ಕಾವ ಸುಲಭ ಸುಂದರ | ೨ |
ಗುರುಸುಧೀಂದ್ರರ ವಿಮಲಕರಜರೆನಿಪರ |
ಸ್ಮರಿಸಿ ಸುರುಚಿರ ಚರಣಯುಗಳ ಪುಷ್ಕರ | ೩ |
ಫಾಲಲೋಚನ ವಿನುತ ಮೂಲರಾಮನ |
ಶೀಲಸದ್ಗುಣ ತುತಿಪ ಶೀಲರನುದಿನ | ೪ |
ಭೂತಭಾವನ ಜಗನ್ನಾಥವಿಟ್ಠಲನ |
ಪ್ರೀತಿಪಾತ್ರನ ನ೦ಬರೀತನೀಕ್ಷಣ | ೫ |
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ
- Log in to post comments