ಪುಟ್ಟಿದವೆರಡು ಜೀವನ

ಪುಟ್ಟಿದವೆರಡು ಜೀವನ

(ರಾಗ ನಾದನಾಮಕ್ರಿಯೆ , ಆದಿತಾಳ) ಪುಟ್ಟಿದವೆರಡು ಜೀವನ ||ಪ || ಬೈಲು ಬೆಟ್ಟದ ಬೇಲಿಯ ನುಂಗುತಲಿಹವೋ ||ಅ|| ಆಶ್ರಮದ ಕಪಿ ಬಂದು ಆಕಾಶ ನುಂಗಿತು ದೇಶವ ನುಂಗಿತು ಒಂದೇ ಅಳಿಲು ಹಳ್ಳ ಕೊಳ್ಳಗಳ ಕೆರೆಬಾವಿಗಳೆಲ್ಲ ಆಪೋಶನ ಮಾಡಿತು ಒಂದೇ ಇರುವೆ || ಹಲ್ಲಿ ಹೋಗಿ ತಾ ಕಾಲನ ನುಂಗಿತು ಇಲಿ ಹೋಗಿ ಈರೇಳು ಲೋಕವ ನುಂಗಿತು ಅಲ್ಲಿದ್ದ ಕೊಡಗಳ ಕೊಡಗೂಸು ನುಂಗಿತು ಬಲ್ಲಿದವರು ಪೇಳಿ ಈ ಸಂಸ್ಕೃತವ || ಕಾಷ್ಠ ಹೋಗಿ ತಾ ಪರ್ವತ ನುಂಗಿತು ಕೃಷ್ಣನ ನುಂಗಿತು ಕಡಲೇಕಾಯಿ ದಿಟ್ಟ ಪುರಂದರವಿಠಲರಾಯನೊಬ್ಬನಿಗೆ ಗುಟ್ಟು ತಿಳಿದೀತು ಈ ಸಂಸ್ಕೃತದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು