ಪಾವನ ನವಪಾವನ

ಪಾವನ ನವಪಾವನ

( ರಾಗ ಆನಂದಭೈರವಿ ಛಾಪುತಾಳ) ಪಾವನ ನವಪಾವನ ನವಪಾವನ ನವಜಗಕೆ || ತುಳಸಿ ನಡೆ ಕೈ ಪಾವನ ದಳವೊಂದಿಡೆ ಕಿವಿ ಪಾವನ ಸ್ಥಳದ ಮೃತ್ತಿಕೆಯಿಡಲು ಪಣೆಯು ಪಾವನವು || ಬೆಳೆದ ಬೃಂದಾವನವ ಬಳಸಿ ಬಂದವ ಪಾವನ ತುಳಸಿ ತೀರ್ಥವ ತೆಕೊಂಡಾತನ ತನುವು ಪಾವನವು || ಏಕಾದಶಿ ವ್ರತ ಪಾವನ ಎಲ್ಲಾ ತೊರೆದವ ಪಾವನ ನಾಲ್ಕು ಝಾವದ ಜಾಗರಣೆಯಿರಲು ಪಾವನವು || ಸಾಮವೇದವು ಪಾವನ ಭೂಮಿಪತಿ ನೀ ಪಾವನ ನಾಮಸ್ಮರಣೆಯು ಪಾವನ ನಾರಾಯಣನ || ತಾ ಹೊನ್ನೂರು ಸರ್ವೋತ್ತಮನೆಂಬೊ ಸೀಮೆಯು ಪಾವನ ಪುರಂದರವಿಠಲನು ಇರುವ ಭೂಮಿ ಪಾವನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು