ಪರಾಕು ಭೀಮನೆಂದು

ಪರಾಕು ಭೀಮನೆಂದು

( ರಾಗ ದೇವಗಾಂಧಾರ. ಆದಿ ತಾಳಾ) ಪರಾಕು ಭೀಮನೆಂದು ಸ್ತುತಿಸಿದೆ ಪಾಲಿಸಬೇಕನ್ನ ||ಪ|| ಸರೋರುಹಾಸನ ಕೌರವನಾಶನಗಿನ್ನು ಸಂಭ್ರಮ ಮೋದಕ ಪಲ್ಲವಪಾಣಿ ||ಅ|| ವಾಣಿಯೊಡೆಯ ಎನ್ನ ಧಿಕ್ಕರಿಸಿ ನಿ- ರ್ವಾಣ ಮಾಡಿ ದಂಡಪಾಣಿ ಸಜ್ಜನಕೆಲ್ಲ ವಾಣಿರಮಣ ನಿನಗೆಲ್ಲೆಣೆಗಾಣೆನು ಅಮಿತವುಳ್ಳ ದೊರೆಯೆ ಎಣೆಗಾಣೆ ಮೂರ್ಲೋಕದಿ ಸರ್ವ ಸ್ಥಾಣು ಮೊದಲಾದ ಪ್ರಾಣಿಗಳಲ್ಲಿ ಇದ್ದ ಪ್ರಾಣಪಂಚರಿಗೆ ನೀನು ಮುಖ್ಯನಾಗಿ ಪ್ರಾಣ ಮುಖ್ಯಪ್ರಾಣ ಸಲಹೊ ಪ್ರಣರಾಯ || ಉಚ್ಚಸ್ಥಾನ ವಿರಾಟನ ಮನೆಯಲಿ ಯಾಚಕರೂಪದೊಳೈವರು ತಾವು ಪಾಚಕವೇಷ ಧರಿಸಿ ಪಾಕವ ಆಚರಿಸುತಲಿರಲು ನೀಚನ ಕರ್ತವ್ಯ ದ್ರೌಪದಿ ಬಂದು ಸೂಚಿಸಲು ನೀ ಕೋಪದಿ ಸರ್ವ ಕೀಚಕ ಮೊದಲವನನುಜರನೆಲ್ಲ ಹೀಚಿ ಬಿಸಾಡಿದ ಮಹಿಮನೆ || ಮಧ್ಯಗೇಹಭಟ್ಟನ ಮನೆಯಲ್ಲಿ ತಾ- ನುದ್ಭವಿಸಿ ತುರ್ಯಾಶ್ರಮ ಧರಿಸಿ ಮಧ್ವಾಚಾರ್ಯರೆಂಬ ನಾಮ ಪ್ರ- ಸಿದ್ಧಿಯನು ಪಡೆದನುದಿನದಿ ಅದ್ವೈತರನೆಲ್ಲ ಗೆದ್ದು ಸದೆದು ಈ ಮಧ್ವಮತವೆ ಭವರೋಗದ ಮದ್ದು ಸದ್ವೈಷ್ಣವರನುದ್ಧಾರ ಮಾಡಿದ ಮುದ್ದು ಪುರಂದರವಿಠಲನ ದಾಸ ||
ದಾಸ ಸಾಹಿತ್ಯ ಪ್ರಕಾರ
ಬರೆದವರು