ನೋಡಬಾರದು ಎಂದಿಂದಿಗೂ

ನೋಡಬಾರದು ಎಂದಿಂದಿಗೂ

(ರಾಗ ಖಮಾಸ್ ಆದಿತಾಳ ) ನೋಡಬಾರದು ಎಂದಿಂದಿಗೂ ನೋಡಬಾರದು ಈ ಮೂರ್ಖನ್ನ ಈ ಘಾತಕನ ಈ ಪಾಪಿಯ ||ಪ|| ನೋಡಿದರೆ ಸೂರ್ಯನ್ನ ನೋಡಿ ಪರಮಾತ್ಮನ ಸ್ಮರಿಸಬೇಕು ||ಅ|| ಅಶ್ರದ್ಧೆಯಿಂದ ಹರಿಚಿಹ್ನೆ ಇಲ್ಲದವರ ವಿಶ್ವಾಸಘಾತಕ ವೇಷಧಾರಿಯರ ಪಶ್ವಾದಿ ವರ್ತನವು ಉದ್ಯೋಗಬ್ರಹ್ಮಜೀವರೈಕ್ಯವೆಂಬರ ಶಾಸ್ತ್ರ ಏಕ ಪ್ರಕಾರ ನಾ ಶಕ್ತನೆಂದು ತಿಳಿದವರ || ತುಲಸಿಯಿಲ್ಲದ ಮನೆ ತುಷ್ಟಿಯಿಲ್ಲದ ವಿಪ್ರ ಜಲಜನಾಭನ ಸತತ ಸ್ಮರಿಸದವರ ಸಲೆ ನಿಜ ಸತ್ಕರ್ಮ ಇಲ್ಲದಂಥವರ ಶ್ರೀಲೋಲ ಪರನೆಂದು ತಿಳಿಯದವರ || ಸಾಲಿಗ್ರಾಮ ಸುದರ್ಶನ ಚಕ್ರಾಣಿಕೆ ರಹಿತವಾಗಿ ಮೂಲಮಂತ್ರ ಪ್ರತಿಮೆ ಇಲ್ಲದ ಮೂರ್ತಿಯ ಪೂಜೆ ಸಾಲ ಮಾಡಿ ಅಂಜದವರ ಸಜ್ಜನರ ದೂಷಿಸುವರ ಅಲಸದೆ ಸಿಟ್ಟು ಬಿಡದೆ ಇಹರನ್ನ || ಅತ್ತೆ ಮಾವರ ಸೇವೆ ಮಾಡದೆ ಪತಿಗೆ ಅಂಜದವಳ ಉ- ನ್ಮತ್ತ ಸ್ತ್ರೀಯಳ ನಿಷ್ಠೂರ ಮಾತನಾಡುವಳ ಉತ್ತಮ ಮಧ್ಯಮ ನೀಚವ ತಿಳಿಯದವರ ಚಿತ್ತದಲ್ಲಿ ಕ್ರೋಧವಿಟ್ಟು ಮತ್ತು ಮಾತನಾಡುವರ || ಅತ್ಯಂತ ಭೇದವಾದ ಶ್ರೀಮದಾನಂತರೂಪಗಳಿಗೆ ಪ್ರತ್ಯೇಕ ಗುಣಗಳನು ಹೇಳುವ ಬ್ರಹ್ಮರನ್ನ ಸತ್ಯವೆಲ್ಲ ಮಿಥ್ಯವೆಂಬೊ ಸ್ವಾಮಿದ್ರೋಹಿಗಳ ಸತ್ಯವಾದ ಪುರಂದರ ವಿಠಲನ್ನ ಸ್ಮರಿಸದವರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು