ನೆನೆವೆ ನಾನನುದಿನ

ನೆನೆವೆ ನಾನನುದಿನ

(ರಾಗ ಸೌರಾಷ್ಟ್ರ. ಆದಿ ತಾಳ ) ನೆನೆವೆ ನಾನುದಿನ ನಿಮ್ಮೀ ಮಹಿಮೆಯನು, ಮಧ್ವರಾಯ ||ಪ|| ಸನಕಾದಿವಂದ್ಯ ಸೇವಿತ ಪದಾಬ್ಜ ,ಮಧ್ವರಾಯ ||ಅ.ಪ|| ಕಲಿಮಲದಿಂ ಕಲುಷಿತವಾಗಲು ಜ್ಞಾನ, ಮಧ್ವರಾಯ ನಳಿನಾಕ್ಷನಾಜ್ಞದಿ ಇಳೆಯೊಳಗುದಿಸಿದ್ಯೋ, ಮಧ್ವರಾಯ || ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ಯೋ, ಮಧ್ವರಾಯ ಸಾವಿರ ಬೀಜರೂಪದಿ ಸಾಲದ ಹಣವಿತ್ತ್ಯೋ , ಮಧ್ವರಾಯ || ದಶ ಉಪನಿಷದ್ಗೀತ ಶ್ರುತಿಭಾಷ್ಯ ಮಾಡಿದ್ಯೋ , ಮಧ್ವರಾಯ ಸುಶಾಸ್ತ್ರ ತಾತ್ಪರ್ಯ ಪ್ರಕರಣವ ರಚಿಸಿದ್ಯೋ, ಮಧ್ವರಾಯ || ಸುಜನರ ಹೃದಯದಿ ಸೇರಿದ್ದ ತಮವನ್ನು ,ಮಧ್ವರಾಯ ನಿಜ ಜ್ಞಾನ ರವಿಯಾಗಿ ಉದಿಸಿ ನೀ ಹರಿಸಿದ್ಯೋ, ಮಧ್ವರಾಯ|| ವ್ಯಾಸದೇವರಿಗೆ ವಂದಿಸಿ ಬದರಿಯಲಿ, ಮಧ್ವರಾಯ ಶ್ರೀಶ ಪುರಂದರವಿಠಲದಾಸ ನಮ್ಮ, ಮಧ್ವರಾಯಾ ||
ದಾಸ ಸಾಹಿತ್ಯ ಪ್ರಕಾರ
ಬರೆದವರು