ನೆನೆಯಿರೋ ಭಕ್ತಜನರುಗಳು

ನೆನೆಯಿರೋ ಭಕ್ತಜನರುಗಳು

(ರಾಗ ದ್ವಿಜಾವಂತಿ ಆದಿ ತಾಳ ) ನೆನೆಯಿರೋ ಭಕ್ತ ಜನರುಗಳು ಅನುದಿನ ಘನಮಹಿಮನ ಸೇವೆಯ ಮಾಡಿದರೆ ಮನದಲ್ಲಿ ನೆನೆದಂಥ ಅಭೀಷ್ಟವನೀವ ಹನುಮಂತ || ಪ || ಒಂದು ಯುಗದಲ್ಲಿ ಹನುಮಾವತಾರನಾಗಿ ಬಂದು ನೆರೆದಯೋಧ್ಯಾಪುರಕಾಗಿ ಬಂದ ಧೀರನ ನೋಡಿ ಸುಜನರೆಲ್ಲಾ ನಂದದಿಂದಲಿ ಪಾಡಿ || ವಾಯುಕುಮಾರಕ ದ್ವಾಪರದಲ್ಲಿ ಭೀಮ- ರಾಯನೆಂದೆನಿಸಿದ ಕೌರವ ಬಲದಿ ನಾಯಕನಾಗಿ ಬಂದು ದುಶ್ಯಾಸನನ ಕಾಯವನಳಿಸಿ ನಿಂದು || ಕಾಯಜಪಿತನ ಮುಂದೆ ಕೌರವ ತರಿದು ರಾಜ- ಸೂಯ ಯಾಗವ ಮಾಡಿದ ಬಲವಂತ ರಾಯರಾಯರ ಧೀರ ಹನುಮಂತ ಪ್ರಿಯಜನಮಂದಾರ || ಗುರು ಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ ಕರುಣಾಕರನಾಗಿ ಶರಣರ ಪೊರೆವ ಮೆರೆವ ಶ್ರೀಹನುಮಂತನ ಈ ದೇವನ ಸ್ಮರಿಸಿರೋ ಗುಣವಂತನ || ಲಂಕಾಪಟ್ಟಣ ಸಮೀಪ ಸಮುದ್ರವ ದಾಟಿ ಪಂಕಜನಾಭ ಶ್ರೀಪುರಂದರವಿಠಲ ನಿ- ಶ್ಶಂಕ ರಾವಣನ ಗೆದ್ದ ಈ ಹನುಮಂತ ಪಂಕಜಮುಖಿಯ ಕಂಡ ||
ದಾಸ ಸಾಹಿತ್ಯ ಪ್ರಕಾರ
ಬರೆದವರು