ನೆಂಟನು ಸಣ್ಣವನೆಂದು
(ರಾಗ ಶಂಕರಾಭರಣ ಆದಿ ತಾಳ )
ನೆಂಟನು ಸಣ್ಣವನೆಂದು
ನಂಬಿದೆನಮ್ಮ
ಗಂಟುಕಳ್ಳನೆಂದರಿಯದೆ
ಕಾಂತೆ ಕೇಳು ಶ್ರೀ ಕೃಷ್ಣನ || ಪ||
ಗೊಂಬೆಯ ಮದುವೆಗೆ ಎಂದು
ಸಂಭ್ರಮದಲ್ಲಿ ಬಾರೆಂದು
ಬೆಂಬಿಡದೆನ್ನನು ಬಂದು
ಚುಂಬಿಸಿದನಲ್ಲೆ ಇಂದು ||
ಪುಟ್ಟ ಮಕ್ಕಳೊಳಗೆಲ್ಲ
ನೆಟ್ಟನೆ ಯೆಜಮಾನನೆಂದು
ಇಟ್ಟಡಿಯೊಳಗೆ ಎನ್ನ
ಬಟ್ಟ ಕುಚವ ಪಿಡಿದನಮ್ಮ ||
ಅಷ್ಟರೊಳಗೆನ್ನ ಬಾಲ-
ಕೃಷ್ಣ ಕರದಿಂದಯ್ಯಯ್ಯೋ
ಮುಟ್ಟಬಾರದ ಬಳಿಯ
ಮುಟ್ಟಿ ನೋಡಿದ ಕೃಷ್ಣಯ್ಯ ||
ಏನೆ ತಾನೆಂದು ಮಾತಾಡಿ
ವಿನಯದಿಂದೆನ್ನ ನೋಡಿ
ಮಾನಿನಿಯೊಳಗೆ ಮಾಡಿ
ನಿನ್ನ ಮಗ ಎನ್ನನು ಕೂಡಿ ||
ಅಂದವೇನೆ ಈ ಪರಿಯೊ-
ಳಿಂದು ಎನ್ನ ಬಿಗಿದಪ್ಪಿ
ಚಂದದಿ ನೆರೆದ ಶ್ರೀಪು-
ರಂದರ ವಿಟ್ಠಲನಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments