ನೀನೇ ದಯಾಳೋ

ನೀನೇ ದಯಾಳೋ

(ರಾಗ ಆನಂದಭೈರವಿ. ಅಟ ತಾಳ ) ನೀನೇ ದಯಾಳೋ ನಿರ್ಮಲ ಚಿತ್ತ ಗೋವಿಂದ ನಿಗಮ ಗೋಚರ ಮುಕುಂದ ||ಪ|| ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ||ಅ.ಪ|| ದಾನವಾಂತಕ ದೀನಜನ ಮಂದಾರನೆ ಧ್ಯಾನಿಪರ ಮನ ಸಂಚಾರನೆ ಮೌನನಾದೆನು ನಿನ್ನ ಧ್ಯಾನಾನಂದದಿ ಈಗ ಸಾನುರಾಗದಿ ಕಾಯೋ ಸನಕಾದಿ ವಂದ್ಯನೆ || ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರ ಖಗಪತಿ ವಾಹನನೆ ಮಗುವಿನ ಮಾತೆಂದು ನಗುತ ಕೇಳಿ ನೀನು ಬೇಗದಿಂದಲಿ ಕಾಯೋ ಸಾಗರಶಯನನೆ || ಮಂದರಧರ ಅರವಿಂದ ಲೋಚನ ನಿನ್ನ ಕಂದನೆಂದೆಣಿಸೊ ಎನ್ನ ಸಂದೇಹವೇಕಿನ್ನು ಸ್ವಾಮಿ ಮುಕುಂದನೆ ಬಂದೆನ್ನ ಕಾಯೋ ಶ್ರೀ ಪುರಂದರವಿಠಲನೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು