ನಿನ್ನ ನೋಡಿ ಧನ್ಯನಾದೆನೋ

ನಿನ್ನ ನೋಡಿ ಧನ್ಯನಾದೆನೋ

ರಾಗ ಶಂಕರಾಭರಣ/ರೂಪಕ ತಾಳ ನಿನ್ನ ನೋಡಿ ಧನ್ಯನಾದೆನೋ, ಹೇ ಶ್ರೀನಿವಾಸ || ಪಲ್ಲವಿ || ನಿನ್ನ ನೋಡಿ ಧನ್ಯನಾದೆ ಎನ್ನ ಮನೋನಯನಕೀಗ ಲಿನ್ನು ದಯಮಾಡು ಸುಪ್ರಸನ್ನ ಸ್ವಾಮಿ ಪಾಂಡುರಂಗ || ಅನುಪಲ್ಲವಿ || ಪಕ್ಷಿವಾಹನ ಲಕ್ಷ್ಮೀರಮಣ ಲಕ್ಷ್ಮೀ ನಿನ್ನ ವಕ್ಷದಲ್ಲಿ ರಕ್ಷ ಶಿಕ್ಷಣದಕ್ಷ ಪಾಂಡವ ಪಕ್ಷ ರಕ್ಷ ಕಮಲಾಕ್ಷ || ೧ || ದೇಶದೇಶ ತಿರುಗಿ ನಾನು ಆಶಾಬಧ್ಧನಾದೆ ಸ್ವಾಮಿ ದಾಸನು ನಾನಲ್ಲವೆ ಜಗ ದೀಶ ಶ್ರೀಶ ಶ್ರೀನಿವಾಸ || ೨ || ಕಂತುಜನಕ ಕೇಳೊ ನೀ ನಿ ರಂತರದಿ ನಿನ್ನ ಸೇವೆ ಅಂತರಂಗದಿ ಪಾಲಿಸಯ್ಯ ಹೊಂತಕಾರಿ ಪುರಂದರವಿಠಲ || ೩ || ~~~ * ~~~ ಎನ್ನ ಮನೋನಯನಕೀಗಲಿನ್ನು - ಇನ್ನು ಈಗ ನನ್ನ ಮನಸ್ಸಿನ ಕಣ್ಣುಗಳಿಗೆ, ಎಂದರೆ ಭಾವನೆಗಳಿಗೆ, ದಯ ಮಾಡಿಸು. ಪಕ್ಷಿವಾಹನ - ಗರುಡವನ್ನೇರಿ ಹೋಗುವವನು. ಪಕ್ಷದಲ್ಲಿ - ಎದೆಯಲ್ಲಿ; ವಕ್ಷ: ಸ್ಥಳ ಲಕ್ಷ್ಮೀ ರಕ್ಷ ಶಿಕ್ಷಣದಕ್ಷ - ಸಜ್ಜನರನ್ನು ಕಾಪಾಡುವುದರಲ್ಲೂ ದುರ್ಜನರನ್ನು ಕಾಡುವುದರಲ್ಲೂ ಗಟ್ಟಿಗ ಕಂತುಜನಕ - ಮನ್ಮಥನ ತಂದೆ ನಿರಂತರದಿ ಎಡೆಬಿಡದೆ ಹೊಂತಕಾರಿ - ಹಲವು ಉಪಾಯಗಳನ್ನು ಬಲ್ಲವನು, ಚತುರ. [ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು