ನಿನ್ನ ನಂಬಿದೆ ನೀರದಶ್ಯಾಮ

ನಿನ್ನ ನಂಬಿದೆ ನೀರದಶ್ಯಾಮ

(ರಾಗ ಆನಂದಭೈರವಿ ಛಾಪುತಾಳ ) ನಿನ್ನ ನಂಬಿದೆ ನೀರದಶ್ಯಾಮ ||ಪ|| ಎನ್ನ ಪಾಲಿಸೊ ಸೀತಾರಾಮ ||ಅ|| ಪಾರವಿಲ್ಲದೆ ಸಂಸಾರವು ಅಪಾರವಾರಿಧಿಯೊಳು ಮುಣುಗಿದೆ ನಾನು ನಾರಿ ಸುತರು ತನ್ನವರೆಂದು ಭ್ರಾಂತಿಯಲಿ ಬಿದ್ದು ನೊಂದೆನೊ ಹರಿಯೆ || ವೇದ ಶಾಸ್ತ್ರಂಗಳು ಓದಿ ವಾದಿಸಿ ಬಲು ಜನ್ಮ ಬಳಲಿದೆ ನಾನು ಆದಿಮೂರುತಿ ಪಾದವನ್ನು ಅನುಸರಿಸದೆ ಲೋಕರಂಜಿತನಾದೆ || ಆರು ಗರ್ವಗಳು ಕೂಡಿ ಬರಿದೆ ಇಂದ್ರಿಯ ತಾನೆಲ್ಲ ನೋಡಿ ತೋರಿದೆ ಹರಿದಾಸನೆಂದು ಗಾರುಡಿ ಮಾಡಿ ನಾ ಕಾಲವ ಕಳೆದೆ || ಪರಸತಿ ಪರದ್ರವ್ಯಗಳನೆ ಪರನಿಂದೆ ಪರದ್ರೋಹಗಳನೆ ಮಾಡಿದೆನೊ ದುರಿತ ಪರ್ವತವೆತ್ತಿದೆನೊ ಸ್ಥಿರವಾದ ತನುವೆಂದು ಮರಣ ಜರೆದೆನೊ || ಬಂದೆನೊ ಬಹು ಜನ್ಮದಲ್ಲಿ ನೊಂದೆನೊ ವಿಷಯದ ಬಾಧೆಗಳಲ್ಲಿ ಮುಂದೇನು ಗತಿಯೆನಗಿಲ್ಲ ತಂದೆ ನೀನಲ್ಲದೆ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು