ನಿನ್ನನೆ ನಂಬಿದೆನು ನೀನೆನ್ನ ಸಲಹಯ್ಯ

ನಿನ್ನನೆ ನಂಬಿದೆನು ನೀನೆನ್ನ ಸಲಹಯ್ಯ

(ರಾಗ ಕೇದಾರಗೌಳ ಝಂಪೆತಾಳ ) ನಿನ್ನನೆ ನಂಬಿದೆನು ನೀನೆನ್ನ ಸಲಹಯ್ಯ ಎನ್ನ ಗುಣ ದೋಷಗಳ ಎಣಿಸಬೇಡಯ್ಯ ||ಪ|| ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತಿದೆ ಬೇಸರದೆ ಸ್ತ್ರೀಯರೊಳು ಬುದ್ಧಿಯೆನಗೆ ವಾಸುದೇವನೆ ಸ್ಮರನೆ ಒಮ್ಮೆ ಮಾಡಿದವನಲ್ಲ ಕೇಶವನೆ ಕ್ಲೇಶಗಳ ಪರಿಹರಿಸಿ ಕಾಯೊ || ಬಾಲ್ಯದಲಿ ಕೆಲವು ದಿನ ಬರಿದೆ ಹೋಯಿತು ಹೊತ್ತು ಮೇಲೆ ಯೌವನದಲಿ ನಾನರಿಯದೆ ಹಾಳು ಸಂಸಾರದಲಿ ಸಿಕ್ಕಿದೆನು ಹರಿಯೆ ಪಾಲಿಸೋ ಪರಮಾತ್ಮ ಭಕುತಿಯನು ಕೊಟ್ಟು || ಈ ತೆರದಲಿ ಇಂದಿರೇಶ ಕಾಲವ ಕಳೆದೆ ಭೀತನಾಗದೆ ಯಮಗೆ ಅಜ್ಞಾನದಿ ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆ ದಾತ ಪುರಂದರವಿಠಲ ದಯಮಾಡಿ ಸಲಹೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು