ನಾ ಮುಂದೆ ರಂಗ ನೀ ಎನ್ನ ಹಿಂದೆ

ನಾ ಮುಂದೆ ರಂಗ ನೀ ಎನ್ನ ಹಿಂದೆ

(ರಾಗ ಕಾಂಭೋಜಿ. ಝಂಪೆ ತಾಳ ) ನಾ ಮುಂದೆ ರಂಗ ನೀ ಎನ್ನ ಹಿಂದೆ ಎಂದೆಂದು ನಿನ್ನ ನಾಮವ ಎಂದಂಬೆ ||ಪ|| ಅನಾಥನು ನಾನು ಎನಗೆ ಬಂಧು ನೀನು ಹೀನನು ನಾನು ದಯವಂತ ನೀನು ಧ್ಯಾನಮಂತ್ರನು ನೀನು ಧ್ಯಾನಿಸುವನು ನಾನು ಜ್ಞಾನಗಮ್ಯನು ನೀನು ಅಜ್ಞಾನಿ ನಾನು || ಸುರತರುವೆ ನೀನು ಫಲ ಬಯಸುವಂಥವ ನಾನು ಸುರಧೇನು ನೀನು ಕರೆದುಂಬೆ ನಾನು ವರಚಿಂತಾಮಣಿ ನೀನು ಪರಿಚಿಂತಿಸುವೆ ನಾನು ಶರಧಿಕ್ಷೀರನೆ ನೀನು ತರಳನು ನಾನು || ಒಂದರೊಳೊಂದೊಂದು ಅವಗುಣವ ಹೊಂದಿದೆ ಕಂದನೆಂದೆತ್ತಿಕೊ ಸಲಹೊ ಬೇಗ ತಂದೆ ಶ್ರೀಪುರಂದರವಿಠಲರಾಯ ನೀ ಬಂದೆನ್ನ ಮನದಲಿ ನಲಿನಲಿದಾಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು