ನಾರಾಯಣ ನಿನ್ನ ನಾಮದ

ನಾರಾಯಣ ನಿನ್ನ ನಾಮದ

(ರಾಗ ಆನಂದಭೈರವಿ. ರೂಪಕ ತಾಳ ) ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ ಕೂಡುವಾಗಲಿ ನಿಂತಾಡುವಾಗಲಿ ಮತ್ತೆ ಹಾಡುವಾಗಲಿ ಹರಿದಾಡುವಾಗಲಿ ಖೋಡಿ ವಿನೋದದಿ ನೋಡದೆ ನಾ ಬಲು ಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ ಊರಿಗೇ ಹೋಗಲಿ ಊರೊಳಗಿರಲಿ ಕಾರಣಾರ್ಥಂಗಳೆಲ್ಲ ಕಾದಿರಲಿ ವಾರಿಜನಾಭ ನರಸಾರಥಿ ಸನ್ನುತ ಸಾರಿ ಸಾರಿಗೇ ನಾ ಬೇಸರದ್ಹಾಗೆ ಹಸಿವಿದ್ದಾಗಲಿ ಹಸಿವಿಲ್ಲದಾಗಲಿ ರಸಕಸಿ ಇರಲಿ ಹರುಷಿರಲಿ ವಸುದೇವಾತ್ಮಕ ಶಿಶುಪಾಲಕ್ಷಯಾ ಅಸುರಾಂತಕ ನಿನ್ನ ಹೆಸರು ಮರೆಯದ್ಹಾಗೆ ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ ಎಷ್ಟಾದರೆ ಮತಿಗೆಟ್ಟಿರಲಿ ಕೃಷ್ಣ ಕೃಷ್ಣ ಎಂದು ಶಿಷ್ಯರು ಪೇಳುವ ಅಷ್ಟಾಕ್ಷರ ಮಹಾ ಮಂತ್ರದ ನಾಮವ ಕನಸಿನೊಳಾಗಲಿ ಕಳವಳಿಕಾಗಲಿ ಮನಸುಗೊಟ್ಟಿರಲಿ ಮುನಿದಿರಲಿ ಜನಕಜಾಪತಿ ನಿನ್ನ ಚರಣ ಕಮಲವನು ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳೋ ಹಾಗೆ ಜ್ವರ ಬಂದಾಗಲಿ ಚಳಿ ಬಂದಾಗಲಿ ಮರಳಿ ಮರಳಿ ಮತ್ತೆ ನಡುಗುವಾಗಲಿ ಹರಿನಾರಾಯಣ ದುರಿತನಿವಾರಣನೆಂದು ಇರುಳು ಹಗಲು ನಿನ್ನ ಸ್ಮರಣೆ ಮರೆಯದ್ಹಾಗೆ ಸಂತತ ಹರಿ ನಿನ್ನ ಸಾಸಿರ ನಾಮವು ಅಂತರಂಗದ ಒಳಗಿರಿಸಿ ಎಂತೋ ಪುರಂದರ ವಿಟ್ಠಲರಾಯನೆ ಅಂತ್ಯ ಕಾಲದಲ್ಲಿ ಚಿಂತಿಸೋಹಾಗೇ
ದಾಸ ಸಾಹಿತ್ಯ ಪ್ರಕಾರ
ಬರೆದವರು