ನಾನೇಕೆ ಬಡವನು

ನಾನೇಕೆ ಬಡವನು

(ರಾಗ ಮುಖಾರಿ . ಝಂಪೆ ತಾಳ ) ನಾನೇಕೆ ಬಡವನು ನಾನೇಕೆ ಪರದೇಶಿ ಶ್ರೀನಿಧೇ ಹರಿ ಎನಗೆ ನೀನಿರುವ ತನಕ ಪುಟ್ಟಿಸಿದ ತಾಯ್ತಂದೆ ಇಷ್ಟ ಮಿತ್ರನು ನೀನೆ ಅಷ್ಟ ಬಂಧುವು ಸರ್ವ ಬಳಗ ನೀನೆ ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ ಶ್ರೇಷ್ಠ ಮೂರುತಿ ಕೃಷ್ಣ ನೀನಿರುವ ತನಕ ಒಡ ಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೆ ಉಡಲು ಹೊದಿಯಲು ವಸ್ತ್ರ ಕೊಡುವವ ನೀನೆ ಮಡದಿ ಮಕ್ಕಳನೆಲ್ಲ ಕಡೆಹಾಯ್ಸುವವ ನೀನೆ ಬಿಡದೆ ಸಲಹುವ ಒಡೆಯ ನೀನಿರುವ ತನಕ ವಿದ್ಯೆ ಹೇಳುವ ನೀನೆ ಬುದ್ಧಿ ಕಲಿಸುವ ನೀನೆ ಉದ್ಧಾರ ಕರ್ತ ಮಮ ಸ್ವಾಮಿ ನೀನೆ ಮುದ್ದು ಸಿರಿ ಪುರಂದರವಿಠಲ ನಿನ್ನಡಿ ಮೇಲೆ ಬಿದ್ದು ಕೊಂಡಿರುವ ಎನಗೇತರ ಭಯವು
ದಾಸ ಸಾಹಿತ್ಯ ಪ್ರಕಾರ
ಬರೆದವರು