ನಾಚಿಕೆಗೊಳಬೇಡ ಮನದಲಿ

ನಾಚಿಕೆಗೊಳಬೇಡ ಮನದಲಿ

(ರಾಗ ಸುರುಟಿ ಆದಿತಾಳ ) ನಾಚಿಕೆಗೊಳಬೇಡ ಮನದಲಿ , ಯೋಚಿಸಿ ಕೆಡಬೇಡ ||ಪ|| ನೀಚವೇನೊ ನಮ್ಮಚ್ಯುತನೋಲಗ , ಮೆಚ್ಚಿ ಕೊಟ್ಟಿದೆ ನಿನಗ್ಹೆಚ್ಚಿನ ಪದವಿಯು ||ಅ|| ಹರಿ ಹರಿ ಎಂದೊದರೊಹತ್ತಿದ, ದುರಿತಗಳಿಗೆ ಬೆದರೊ ನೀರಜಾಕ್ಷ ನಿರ್ಜರಪತಿ ಹರಿಯೆಂದು, ಚೀರಿ ಹಾರಿ ಭೋರಿಡುತಲಿ ಕುಣಿಯೊ || ಯಾರ ಗೋಡವೆಯೆನೊ ನರಕದ, ಧಾರಿ ತಪ್ಪಿಪರೇನೊ ಸಾರಿಸಾರಿಗೆ ಸರ್ವೇಶನ ನಾಮವ, ಬೀರಿ ಬೀರಿ ಕೈ ಮುಗಿದು ಕೊಂಡಾಡೋ || ಭಕ್ತಜನರ ಕೂಡೊ ಭವಭಯ , ಬತ್ತಿಪೋಪುದು ನೋಡೊ ಮುಕ್ತಿದಾಯಕ ಶ್ರೀ ಪುರಂದರವಿಠಲನ, ಭಕ್ತಿಯಿಂದ ನೀ ಪಾಡುತ ಕುಣಿಯೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು