ನರಹರಿ ಎನಬಾರದೆ

ನರಹರಿ ಎನಬಾರದೆ

(ರಾಗ ಕಲ್ಯಾಣಿ ಅಟತಾಳ) ನರಹರಿ ಎನಬಾರದೆ ||ಪ|| ಬಾರಿ ಬಾರಿಗೀ ಶರೀರವು ಬಾರದ್ಹಾಗೆ ಮಾಡೋ ನಾಮವು ಘೋರಿಸಿದ ಪ್ರಹ್ಲಾದನ ಜನಕನ ಉರವ ಸೀಳಿದ ನಾಮವು ||ಅ|| ದಾರಿದ್ರ್ಯಾದಿ ಭಯವೊಂದು ಇಲ್ಲ , ದಾರಿ ವೈಕುಂಠಕೆ ತೋರೋದಲ್ಲ ನಾರಾಯಣ ನಿಮ್ಮ ನಾಮ ಉಚ್ಚರಿಸಿದ ನಾರದ ದೇವಋಷಿಯಾದನು || ಜಪತಪದಲಿ ಮಾಡು ಮತಿ, ಜಪಿತ ಮಾರ್ಗವಿದು ಕಠಿನವಲ್ಲ ಶ್ರೀಪತಿಯೆಂದ ದ್ರೌಪದಿಯ ಅಭಿಮಾನವ ಕಾಯಿದ ಶ್ರೀ ನಾಮವು || ಮಂಗಳಮೂರುತಿಯೆ ಹಿಂಗದೆ ಭಕ್ತಿರಸದಲ್ಲಿ ಮುಣುಗಿದೆ ರಂಗ ಪುರಂದರವಿಠಲರಯನ ಉರಗಶಯನನಾದ ನಮವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು