ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ

ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ

------ಭೀಮಪಲಾಸ್ ರಾಗ ತೀನ್ ತಾಳ ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ ಸುಮ್ಮನಿರುವೆ ಕಂಡು ಸಂತತ ಚರಣ ಒಮ್ಮನದಿಂದೆ ತೃಪ್ತ್ಯಾಯಿತು ಜೀವನ ||೧|| ಸದ್ಬೋಧವನ್ನ ನೀಡಲು ಓಡಿಬಂದೆ ಸದ್ಗುರುವೆ ಒಡೆಯ ನೀನಹುದೆಂದೆ ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ ಬುದ್ಧಿವಂತರ ಬೆನ್ನಟ್ಟಿ ಹೋಗೆ ಹಿಂದೆ ||೨|| ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು ಕೇಳಿಕೊಂಡಿಹೆ ಗುಹ್ಯವಾಕ್ಯದ ಹೆಜ್ಜಿ ಮೆಟ್ಟು ಸುಳುವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು ತಿಳದ್ಹಾಕಿದೆ ನಾ ನಿಮ್ಮ ಪಾದರಕ್ಷಕೆ ಗಂಟು ||೩|| ಬಾಗಿಲ ಕಾಯಿಕೊಂಡು ಬಿದ್ದಿಹ ನಿಮ್ಮ ಶ್ವಾನ ಹಗಲಿರುಳು ನಾ ಬೊಗಳುವೆ ನಿಜಗುಣ ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ ಸುಗಮದಿಂದ ದೊರೆಯಿತು ನಿಜಸ್ಥಾನ ||೪|| ಹಿಡಿದು ಕಚ್ಚಿಹೆ ನಿಮ್ಮ ಪಾದರಕ್ಷೆ ಸಂಪೂರ್ಣ ಬಿಡೆ ಎಂದೆಂದು ನಾ ಹೋದರೆ ಜೀವ ಪ್ರಾಣ ಪಿಡಿದು ಮಾಡುವೆ ನಾ ಜತನ ಮೂಢ ಮಹಿಪತಿಗಿದೇ ಸುಖ ಸಾಧನ ||೫|| ---------- ರಚನೆ - ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು