ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ

ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ

(ರಾಗ ಸೌರಾಷ್ಟ್ರ ಅಟ ತಾಳ ) ನಡುಮನೆಯೊಳಗೊಂದು ನಾಲ್ಕು ತೆಂಗಿನ ಮರ, ಹೇ ಗಿಣಿಯೇ ಹೇ ಗಿಣಿಯೇ ||ಪ|| ಅದು ತಲೆ ಮೊದಲಿಲ್ಲದೆ ಬೆಳೆದು ಹಣ್ಣಾಯಿತು, ಹೇ ಗಿಣಿಯೇ ಹೇ ಗಿಣಿಯೇ ||ಅ|| ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ, ಹೇ ಗಿಣಿಯೇ ಹೇ ಗಿಣಿಯೇ, ಅದ ತಲೆಯಿಲ್ಲದವ ಬಂದು ಹೊತ್ತು ತಂದಿಟ್ಟ, ಹೇ ಗಿಣಿಯೇ ಹೇ ಗಿಣಿಯೇ || ಕಣ್ಣಿಲ್ಲದವ ನೋಡಿ ಕೆಂಪಿನ ಹೆಣ್ಣೆಂದ, ಹೇ ಗಿಣಿಯೇ ಹೇ ಗಿಣಿಯೇ, ಅದ ಬಾಯಿಲ್ಲದವ ತಿಂದು ಬಸಿರೊಳಂಬನೆ ಬಿಟ್ಟ, ಹೇ ಗಿಣಿಯೇ ಹೇ ಗಿಣಿಯೇ || ಹಾಲವೃಕ್ಷದ ಮೇಲೆ ಹಕ್ಕಿ ತಾಳಿಹುದು, ಹೇ ಗಿಣಿಯೇ ಹೇ ಗಿಣಿಯೇ, ಅದ ಹಲಬುತ್ತ ಈರೇಳು ಜಗವ ಮೋಹಿಸುವಂತೆ, ಹೇ ಗಿಣಿಯೇ ಹೇ ಗಿಣಿಯೇ || ಬಲೆಯ ಹಾಕಿದರು ಬಲದಿ ದಾಟುವುದಯ್ಯ, ಹೇ ಗಿಣಿಯೇ ಹೇ ಗಿಣಿಯೇ, ಅದ ಸಲಹುವ ಪುರಂದರ ವಿಠಲರಾಯ ಹೇ ಗಿಣಿಯೇ ಹೇ ಗಿಣಿಯೇ ||
ದಾಸ ಸಾಹಿತ್ಯ ಪ್ರಕಾರ
ಬರೆದವರು