ನಗೆಯು ಬರುತಿದೆ

ನಗೆಯು ಬರುತಿದೆ

(ರಾಗ ಪಂತುವರಾಳಿ ಏಕತಾಳ) ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ ||ಪ || ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವುದ ಕಂಡು || ಅ. ಪ|| ಪರರ ವನಿತೆಯೊಲುಮೆಗೊಲಿದು ಹರುಷದಿಂದ ಅವಳ ಬೆರೆದು ಹರಿವ ನೀರಿನೊಳಗೆ ಮುಳುಗಿ ಬೆರಳ ಎಣಿಸುತಿಹರ ಕಂಡು || ಪತಿಯ ಸೇವೆ ಬಿಟ್ಟು ಪರ- ಪತಿಯ ಕೂಡೆ ಸರಸವಾಡಿ ಸತತ ಮೈಯ ತೊಳೆದು ಹಲವು ವ್ರತವ ಮಾಳ್ಪ ಸತಿಯ ಕಂಡು || ಕಾಮ ಕ್ರೋಧ ಮನದೊಳಿಟ್ಟು ತಾನು ವಿಷಯಪುಂಜನಾಗಿ ಸ್ವಾಮಿ ಪುರಂದರ ವಿಟ್ಠಲನ ನಾಮ ನೆನೆಯುವವರ ಕಂಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು