ದಾಸೋಹಂ ತವ ದಾಸೋಹಂ

ದಾಸೋಹಂ ತವ ದಾಸೋಹಂ

( ರಾಗ- ಪೀಲೂ (ಭೈರವ) ಆದಿತಾಳ) ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ ||ಪ|| ವಾಸುದೇವ ವಿಗತಾಘಸಂಘ ತವ ||ಅ. ಪ|| ಜೀವಾಂತರ್ಗತ ಜೀವ ನಿಯಾಮಕ ಜೀವ ವಿಲಕ್ಷಣ ಜೀವನದ ಜೀವಾಧಾರಕ ಜೀವರೂಪಿ ರಾ- ಜೀವ ಭವಜನಕ ಜೀವೇಶ್ವರ ತವ ||೧|| ಕಾಲಾಂತರ್ಗತ ಕಾಲನಿಯಮಕ ಕಾಲಾತೀತ ತ್ರಿಕಾಲಜ್ಞ ಕಾಲ ಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨|| ಕರ್ಮಕರ್ಮಕೃತ ಕರ್ಮಕೃತಾಗಮ ಕರ್ಮ ಫಲಪ್ರದ ಕರ್ಮಜಿತ ಕರ್ಮಬಂಧ ಮಹ ಕರ್ಮವಿಮೋಚಕ ಕರ್ಮನಿಗ್ರಹ ಕರ್ಮಸಾಕ್ಷಿ ತವ ||೩|| ಧರ್ಮಯೂಪ ಮಹ ಧರ್ಮವಿವರ್ಧನ ಧರ್ಮವಿದೊತ್ತಮ ಧರ್ಮನಿಧೇ ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ ಧರ್ಮಸಾಕ್ಷಿ ಯಮಧರ್ಮಪುತ್ರ ತವ || ೪|| ಮಂತ್ರಯಂತ್ರ ಮಹ ಮಂತ್ರ ಬೀಜ ಮಹ ಮಂತ್ರ ರಾಜಗುರು ಮಂತ್ರಧೃತ ಮಂತ್ರಮೇಯ ಮಹ ಮಂತ್ರನಿಯಾಮಕ ಮಂತ್ರದೇವ ಜಗನ್ನಾಥ ವಿಠಲ ತವ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು