ದಾಸರ ನಿಂದಿಸಬೇಡ

ದಾಸರ ನಿಂದಿಸಬೇಡ

(ರಾಗ ಮಾರವಿ. ಏಕ ತಾಳ) ದಾಸರ ನಿಂದಿಸಬೇಡ ಮನುಜ , ಹರಿ- ದಾಸರ ನಿಂದಿಸ ಬೇಡ ರಾಮನ ನಿಂದಿಸಿ ರಾವಣ ಕೆಟ್ಟ ವಿಭೀಷಣಗಾಯಿತು ಪಟ್ಟ ಭೂಮಿಯ ಲೋಭದಿ ಕೌರವ ಕೆಟ್ಟ ಧರ್ಮಗೆ ರಾಜ್ಯವ ಬಿಟ್ಟ ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ ಸುಡದಲೆ ಬಿಡುವುದೇನಣ್ಣ ಪೊಡವಿಯ ಜನರಿಗೆ ಬಡತನ ಬಂದರೆ ಬಿರುನುಡಿ ಆಡದಿರಣ್ಣ ದೇವಕಿ ಸೆರೆಯನು ಬಿಡಿಸಿದ ದಾಸರು ನರರೇನೈ ಈ ಜಗದೊಳು ಭಾವಜನಯ್ಯನ ಭಕುತರ ಸೇವಿಸೆ ಪಾವನ ಮಾಡುವ ಪುರಂದರ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು