ದಾರ ಮಗನಮ್ಮ

ದಾರ ಮಗನಮ್ಮ

(ರಾಗ ಬೇಗಡ. ಚಾಪು ತಾಳ) ದಾರ ಮಗನಮ್ಮ, ರಂಗಯ್ಯ ದಾರ ಮಗನಮ್ಮ ದಾರಿಯ ನೋಡುತ್ತ ದಾರು ಈತನ ದಾರು ತಿಳಿಯದು ಅರವಿಂದಾನನೆ ಕೇಳ್ ಅರ ಮೊರೆಯಾದರೆ ಅರಿಯದಂದದಿ ಬಂದು ಅ- ಧರ ಮುದ್ದಾಡಿದ ಕಾಂತೆ ಕೇಳ್ ಏ- ಕಾಂತದಿ ಮಲಗಿದೇ ಕಾಂತನಾಗಿ ಏ- ಕಾಂತಕ್ಕೆ ಕರೆತಾರೆ ನಾರಿ ಕೇಳೆ ಅಕ್ಕ ಸಾರವನೆ ಹೊಕ್ಕು ಸೇರಿದ ನಿನ್ನಯ ಸೀರೆಯ ಸೆಳೆದೊಯ್ದ ಸರಸಿಜಾಕ್ಷಿ ಕೇಳ್ ರಾತ್ರೆ ವೇಳ್ಯದಿ ಸರಸರನೇ ಬಂದು ಸರಸವಾಡಿ ಪೋದ ಗಾಡಿಗಾರ ಪುರಂದರ ವಿಠಲ ಗಾಢಾಲಿಂಗನ ಮಾಡಿ ಓಡಿ ಪೋದನಮ್ಮ
ದಾಸ ಸಾಹಿತ್ಯ ಪ್ರಕಾರ
ಬರೆದವರು