Skip to main content

ದಯಮಾಡೋ ದಯಮಾಡೋ ರಂಗ

(ರಾಗ ಮಧ್ಯಮಾವತಿ ಆದಿತಾಳ )

ದಯಮಾಡೋ ದಯಮಾಡೋ , ರಂಗ
ದಯಮಾಡೋ ನಿನ್ನಾ ದಾಸ ನಾನೆಂದು ||

ಹಲವು ಕಾಲದಿಂ ನಿನ್ನ ಹಂಬಲ ಎನಗೆ
ಒಲಿದು ಪಾಲಿಸಬೇಕು ವಾರಿಜನಾಭ ||

ಇಹಪರಗತಿ ನೀನೆ ಇಂದಿರಾರಮಣ
ಸಹಾಯ ನಿನ್ನದೇ ಸರ್ವದಾ ತೋರಿ ಕರುಣ ||

ಕರಿರಾಜವರದನೆ ಕಾಮಿತಫಲದ
ಪುರಂದರವಿಠಲ ಹರಿ ಸಾರ್ವಭೌಮನೆ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: