ತೊಳಲದಿರು ಕಂಡ ಕಡೆಗೆ

ತೊಳಲದಿರು ಕಂಡ ಕಡೆಗೆ

( ರಾಗ ಮುಖಾರಿ ಅಟತಾಳ) ತೊಳಲದಿರು ಕಂಡ ಕಡೆಗೆ, ಪರಮಾತ್ಮ- ನೊಳಕಂಡು ಸುಖಿಸೊ ಮನವೆ || ಲಿಪಿಯೊಳಖಿಳವ ಚಿಂತಿಸಿ ಕಡೆ ಕಡೆಗೆ ಕಪಿಯಂತೆ ಎಡೆಯಾಡದೆ ಮನವೆ ಗುಪಿತದೊಳಗಿದ್ದಾತ್ಮನ ಧ್ಯಾನಿಸಲು ಅಪರಿಮಿತ ಸುಖ ಸುಖಿಸುವೆ ಮನವೆ || ನಾಗ ನರ ಸುರಲೋಕ ತಿರುತಿರುಗಿ ಕಾಗೆಯೆಂತೆಡೆಯಾಡದೆ ಮನವೆ ರಾಗದ್ವೇಷ ತೊಲಗಿಸಿ ಮನದಿ ಮಧು- ಸೂದನನ ಕಾಣು ಕಂಡ್ಯ ಮನವೆ || ಪರರಿಗಿದ ಸೂಚಿಸದಿರೊ ಸಿದ್ಧಾಂತ ಪರಮ ತತ್ವವನು ತಿಳಿದು ಮನವೆ ಗುರುಪುರಂದರವಿಠಲನ ಸ್ಮರಿಸಲು ಸ್ಥಿರವುಳ್ಳ ಮುಕುತಿಯಹುದೊ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು