ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ...

ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ...

ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ ಮಾರಜನಕ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವು ಬಿಲ್ಲು ಹಬ್ಬವಂತೆ ಅಲ್ಲಿ ಬೀದಿ ಶೃಂಗಾರವಂತೆ ಮಲ್ಲರ ಕಾಳಗ ಮದ್ದಾನೆಯಂತೆ ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ ಮಧುರಾ ಪುರಿಯಂತೆ ಅಲ್ಲಿ ಮಾವ ಕಂಸನಂತೆ ಒದಗಿದ ಮದಗಜ ತುರಗ ಸಾಲಿನಲ್ಲಿ ಮದನ ಮೋಹನ ಕೃಷ್ಣ ಮಧುರೆಗೆ ತೆರಳಿದ ಅತ್ತೆ ಮಾವರ ಬಿಟ್ಟು ಬಂದೆವು ಹಿತ್ತಲ ಬಾಗಿಲಿಂದ ಭಕ್ತವತ್ಸಲನ ಬಲು ನಂಬಿದ್ದೆವು ಉತ್ಸಾಹಭಂಗವ ಮಾಡಿದನಮ್ಮ ರಂಗನ ನೆರೆನಂಬಿ ಬಂದೆವು ಸಂಗ ಸುಖವ ಬಯಸಿ ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ ಮಂಗಳಮೂರುತಿ ಮದನ ಗೋಪಾಲನು ಶೇಷಗಿರಿಯ ಮೇಲೆ ಹರಿ ತಾ ವಾಸವಾಗಿಹ ಕಾಣೆ ಸಾಸಿರನಾಮದ ಒಡೆಯನೆಂದೆನಿಸಿದ ಶ್ರೀಶ ಪುರಂದರ ವಿಠ್ಠಲರಾಯನ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ