ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ

ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ

(ರಾಗ ಸೌರಾಷ್ಟ್ರ ಛಾಪುತಾಳ ) ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ ತಾರೇ ಬಿಂದಿಗೆಯ ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ || ರಾಮನಾಮವೆಂಬೋ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ ಕಾಮಿನಿಯರ ಕೂಡ ಏಕಾಂತವಾಡೇನು ತಾರೇ ಬಿಂದಿಗೆಯ || ಗೋವಿಂದ ಎಂಬೋ ಗುಣವುಳ್ಳ ನೀರಿಗೆ ತಾರೇ ಬಿಂದಿಗೆಯ ಆವಾವ ಪರಿಯಲ್ಲಿ ಅಮೃತಪಾನಕ್ಕೆ ತಾರೇ ಬಿಂದಿಗೆಯ || ಬಿಂದುಮಾಧವನ ಘಟ್ಟಕ್ಕೆ ಹೋಗುವೆ ತಾರೇ ಬಿಂದಿಗೆಯ , ಪು- ರಂದರವಿಠಲಗೆ ಅಭಿಷೇಕ ಮಾಡುವೆ ತಾರೇ ಬಿಂದಿಗೆಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು