ತಾರಕವಿದು ಹರಿಕಥಾಮೃತ
( ರಾಗ- ಪಂತುವರಾಳಿ(ಭೈರವಿ) ರೂಪಕತಾಳ(ದಾದರಾ) )
ತಾರಕವಿದು ಹರಿಕಥಾಮೃತ , ಸಾರಜನಕೆ ಘೋರತರ
ಅಸಾರಸಂಸಾರವೆಂಬ ಶರಧಿಗೆ ನವತಾರಕ ||ಪ||
ಶ್ವಾನಸೂಕರಾದಿ ನೀಚಯೋನಿಗಳಲ್ಲಿ ಬಂದು ನೊಂದು
ವೈನತೇಯವಾಹನ ಸನ್ನಿಧಾನ ಬೇಕು ಎಂಬವಗೆ ||೧||
ಪ್ರಿಯವಸ್ತುಗಳೊಳು ಪಾಂಡವರ ಸಖನೆ ಎಮಗೆ ಬ್ರಹ್ಮ
ವಾಯು ಉಚ್ಚಸುರರು ತಂದೆತಾಯಿ ಎಂದರಿತವರಿಗೆ ||೨||
ಶ್ರೀ ಮುಕುಂದ ಸರ್ವ ಮಮ ಸ್ವಾಮಿ ಅಂತ-
ರಾತ್ಮ ಪರಂಧಾಮ ದೀನಬಂಧು ಪುಣ್ಯನಾಮವೆಂದರಿತವರಿಗೆ ||೩||
ಜ್ಞೇಯಜ್ಞಾನಜ್ಞಾತೃ ಬಾದರಾಯಣಾಖ್ಯ ಹರಿಯ ವಚನ
ಕಯ ಮನದಿ ಮಾಡ್ದ ಕರ್ಮ ಶ್ರೀಯರಸನಿಗೀವ ನರಗೆ ||೪||
ಭೂತ ಭವ್ಯ ಭವತ್ಪ್ರಭು ಅನಾಥಜನರ ಬಂಧು ಜಗ-
ನ್ನಾಥವಿಠಲ ಪಾಹಿಯೆಂದು ಮಾತು ಮಾತಿಗೆಂಬುವರಿಗೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments