Skip to main content

ತಾಯಿ ತಂದೆಯೆನ್ನ ಗುರು ದೈವ ನೀನೇ

( ರಾಗ ಸೌರಾಷ್ಟ್ರ ಅಟತಾಳ)

ತಾಯಿ ತಂದೆಯೆನ್ನ ಗುರು ದೈವ ನೀನೇ, ಕೃಷ್ಣ
ಪಾಹಿ ಪಂಚಾಕ್ಷರ ಪರಮಪುಣ್ಯ ನೀನೇ ||ಪ||

ಕಂದನು ಮಾಡಿದ ತಪ್ಪು ಕಾಯುವ ನೀನೇ, ರಾಮ
ಕಂದರ್ಪಜನಕನೆ ಮೋಕ್ಷದಾತನು ನೀನೇ ||

ಅರುಣ ಕರುಣ ಪಿಡಿದು ಕರ್ಮ ಕಳೆಯಬೇಕೊ , ಮುಂದೆ
ಮರಣ ಜನನವಿಲ್ಲದ ಪದವಿ ಸೇರಿಸಬೇಕೊ

ಎಂದೆಂದಿಗೂ ನಿನ್ನ ದಾಸನಾಗಬೇಕೊ
ಪುರಂದರವಿಠಲ ಚರಣವನ್ನು ತೋರಬೇಕೊ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: