ಜೋ ಜೋ ಯಶೋದೆಯ ನಂದ ಮುಕುಂದನೆ

ಜೋ ಜೋ ಯಶೋದೆಯ ನಂದ ಮುಕುಂದನೆ

( ರಾಗ ಆನಂದಭೈರವಿ ತ್ರಿಪುಟತಾಳ) ಜೋ ಜೋ ಯಶೋದೆಯ ನಂದ ಮುಕುಂದನೆ ಜೋ ಜೋ ಕಂಸಕುಠಾರಿ ಜೋ ಜೋ ಮುನಿಗಳ ಹೃದಯಮಂದಿರ ಜೋ ಜೋ ಲಕುಮಿಯ ರಮಣ ||ಪ|| ಹೊಕ್ಕಳಹೂವಿನ ತಾವರೆಗಣ್ಣಿನ , ಇಕ್ಕಿದ್ದ ಮಕರಕುಂಡಲದ ಜಕ್ಕರಿಸುವ ಕದಪಿನ ಸುಳಿಗುರುಳಿನ , ಚಿಕ್ಕ ಬಾಯ ಮುದ್ದುಮೊಗದ ಸೊಕ್ಕಿದ ಮದಕರಿಯಂದದಿ ನೊಸಲಲಿ ಇಕ್ಕಿದ ಕಸ್ತೂರಿತಿಲಕ ರಕ್ಕಸರೆದೆದಲ್ಲಣ ಮುರವೈರಿಯೆ ಮಕ್ಕಳ ಮಾಣಿಕ ಜೋ ಜೋ || ಕಣ್ಣು ಬೆಳಗು ಪಸರಿಸಿ ನೋಡುವ ಅರೆಗಣ್ಣ ಮುಚ್ಚಿ ನಸುನಗುತ ಸಣ್ಣ ಬೆರಳು ಬಾಯೊಳು ಢವಳಿಸುತ ಪನ್ನಂಗಶಯನ ನಾಟಕದಿ ನಿನ್ನ ಮಗನ ಮುದ್ದು ನೋಡೆನುತ ಗೋಪಿ ತನ್ನ ಪತಿಗೆ ತೋರಿದಳು ಚಿನ್ನತನದ ಸೊಬಗಿನ ಖಣಿಯೇ ಹೊಸ ರನ್ನ ಮುತ್ತಿನ ಬೊಂಬೆ ಜೋ ಜೋ || ನಿಡಿತೋಳ್ಗಳ ಪಸರಿಸುತಲಿ ಗೋಪಿಯ ತೊಡೆ ಮೇಲೆ ಮಲಗಿ ಬಾಯ ತೆರೆಯೆ ಒಡಲೊಳು ಚತುರ್ದಶಭುವನವಿರಲು ಕಂಡು ನಡುನಡುಗಿ ಕಣ್ಣ ಮುಚ್ಚಿದಳು ತಡೆಯದೆ ಅಡಿಗಳನಿಡುತಲಿ ಬಂದು ಮಡದೇರ ಮುಖವ ನೋಡುತ ನಿಂದು ಕಡುದಯಾಸಾಗರ ಬಿಡದೆ ರಕ್ಶಿಸು ಎನ ಸಲಹಬೇಕೆಂದು ಜೋ ಜೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು