ಜಾಣ ನೀನಹುದೊ (ಪ್ರಾಣದೇವರ ಸ್ತೋತ್ರ)
(ರಾಗ ನಾದನಾಮಕ್ರಿಯೆ ಆದಿತಾಳ)
ಜಾಣ ನೀನಹುದೊ , ಗುರುಮುಖ್ಯಪ್ರಾಣ ನೀನಹುದೊ ||ಪ||
ಭಾರತಿರಮಣ ನಿನಗೆಣೆಕಾಣೆ ಮೂರು ಲೋಕದಲ್ಲಿದ್ದಂಥ
ಸಕಲ ಪ್ರಾಣದಲಿದ್ದಂಥ ಪಂಚಪ್ರಾಣಗಳಿಗೆ ಪ್ರಾಣನಾಥ ||ಅ||
ಕೊಟ್ಟ ರಾಮಮುದ್ರಿಕೆಯ ಬೆಟ್ಟದಲ್ಲಿ ಸಾಗರ ದಾಟಿ
ಸೀತೆಮುಂದಿಟ್ಟು ಕರಗಳ ಕಟ್ಟಿಕೊಂಡ ವೀರಹನುಮ ||
ಕುಂತಿಸುತ ನೀನಹುದೊ , ಅಸುರರಿಗೆ
ಹಂತಕಾರಿ ನೀನಹುದೊ
ಚಿಂತಿತ ನಮಚರಿತಸಂಗ ಚಿಂತಿಸುವ ಸಜ್ಜನರ
ಅಂತರಂಗವಾದ ನಮ್ಮ ಹಂತಕಾರಿ ಶೂರಭೀಮ
ಮುದ್ದುಮುಖದವ ನೀನಹುದೊ , ಮುಜ್ಜಗವನೆ
ಸದ್ಗುಣವಂದ್ಯ ನೀನಹುದೊ , ಶುದ್ಧಮತವನೆ ನೀ -
ನುದ್ದರಿಪೆನೆಂದು ವೀರ ಬದ್ಧಕಂಕಣ ತೊಟ್ಟ
ಮದ್ಧ್ವಮುನಿರಾಯ ಬಲು ||
ಇಂದುವದನ ನೀನಹುದೊ , ಗುರುರಾಯ ಆ
ನಂದತೀರ್ಥ ನೀನಹುದೊ , ನೊಂದು ಬಂದ ಜನರು
ವಂದಿಸೆ ನಿಮ್ಮ ಚರಣಕಮಲ ನಂಬಿದಂಥ ಭಕ್ತರನ್ನು
ಕುಂದದೆ ಪೊರೆಯುವಿರಂತೆ ||
ಶೂರ ನೀನಹುದೊ ವಾಯುಕುಮಾರ ನೀನಹುದೊ
ಪರಮನನ್ನ ನಂಬಿ ಬಲು , ಪರಮ ಮಹಿಮನೆ ನಮ್ಮ
ಪುರಂದರವಿಠಲನ ಸೇವಿಸಿದ ಕೀರ್ತಿ ಪಡೆದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments