ಜಲಧಿಯ ಲಂಘಿಸಿದವಗೆ , ಜಯ ಮಂಗಳ

ಜಲಧಿಯ ಲಂಘಿಸಿದವಗೆ , ಜಯ ಮಂಗಳ

(ರಾಗ ಪೂರ್ವಿ ಆದಿತಾಳ) ಜಲಧಿಯ ಲಂಘಿಸಿದವಗೆ , ಜಯ ಮಂಗಳ ಸುಲಲಿತ ಮುಖ್ಯಪ್ರಾಣಗೆ , ಶುಭಮಂಗಳ ||ಪ|| ಅಗ್ರಜನ್ನ ಭಯದಲಿದ್ದ ಸುಗ್ರೀವನ್ನ ತಂದು ಲಕ್ಷ್ಮಣ ಅಗ್ರಜನ್ನ ಪಾದಕಮಲಗಳಿಗೆರಗಿಸಿ ನಿಗ್ರಹಿಸಿ ವಾಲಿಯನ್ನು ಶೀಘ್ರದಲ್ಲಿ ಕಪಿರಾಜ್ಯ- ದಗ್ರೇಸರನ ಮಾಡಿದ ಶುಭವಿಗ್ರಹನಿಗೆ || ಏಕಚಕ್ರದಲ್ಲಿದ್ದಾನೇಕ ವಿಪ್ರಸಮೂಹಕ್ಕೆ ಭೀಕರನಾಗಿದ್ದ ಬಕನ ನೂಕಿಹಾಕಿಸಿ ಲೋಕಕ್ಕೆ ಕಂಟಕನಾದ ಕಾಕು ದುರ್ಯೋಧನನ ಕೊಂದು ಶ್ರೀಕಾಂತಗರ್ಪಿಸಿದ ಸುವಿವೇಕಭೀಮನಿಗೆ || ಜೀವೇಶ ಜಡ ಒಂದೆಂಬ ಮಾಯಾವಾದಿಗಳ ಗೆದ್ದು ಜೀವ ಈಶ ಜಡ ಭೇದಗಳ ಸ್ಥಾಪಿಸಿ ದೇವ ಪುರಂದರವಿಠಲನ ಭಕ್ತನಾಗಿ ಜಗ- ಕಾವ ಮಧ್ವಮುನಿವರ ಕರುಣಾನಿಧಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು