ಜಯ ಹರಿಯೊಂಬುದೆ ಸುದಿನವು

ಜಯ ಹರಿಯೊಂಬುದೆ ಸುದಿನವು

ಜಯ ಹರಿಯೊಂಬುದೆ ಸುದಿನವು ಜಯ ಹರಿಯೆಂಬುದೆ ತಾರಾಬಲವು ಜಯ ಹರಿಯೆಂಬುದೆ ಚಂದ್ರಬಲವು ಜಯ ಹರಿಯೆಂಬುದೆ ವಿದ್ಯಾಬಲವು ಜಯ ಹರಿಯೆಂಬುದೆ ದೈವಬಲವು ಜಯ ಹರಿ ಪುರಂದರವಿಠಲನ ಬಲವಯ್ಯಾ ಸುಜನರಿಗೆ || ________________________ ಗಜ ತುರಗ ಸಹಸ್ರದಾನ ಗೋಕುಲ ಕೋಟಿ ದಾನ ಭೂದಾನ, ಸಮುದ್ರಪರ್ಯಂತರ ದಾನ ಪುರಂದರವಿಠಲನ ಧ್ಯಾನಕ್ಕೆ ಸಮವಿಲ್ಲ _______________________ ಶ್ರವಣದಿಂದ ಹೋಯಿತು ಬ್ರಹ್ಮಹತ್ಯಾ ಪಾಪ ಸ್ಮರಣೆಯಿಂದ ಹೋಯಿತು ಸೇರಿದ್ದ ಪಾಪವು ಎಲ್ಲಿದ್ದ ಅಜಮಿಳ, ಎಲ್ಲಿತ್ತು ವೈಕುಂಠ ಕೊಟ್ಟಾತನೇ ಬಲ್ಲ ಪುರಂದರವಿಠಲ _______________________
ದಾಸ ಸಾಹಿತ್ಯ ಪ್ರಕಾರ
ಬರೆದವರು