ಜಯವದೆ ಜಯವದೆ ಈ ಮನೆತನಕೆ

ಜಯವದೆ ಜಯವದೆ ಈ ಮನೆತನಕೆ

(ಜೋಗಿಪದ ಏಕತಾಳ) ಜಯವದೆ ಜಯವದೆ ಈ ಮನೆತನಕೆ ಭಯವಿಲ್ಲ ಎಂದೆಂದಿಗು ನಿಜವು ಬಿಡು ಬಿಡು ಬಿಡು ಬಿಡು ಮನಸಂಶಯವ ಶುಕನೆಂಬ್ಹಕ್ಕಿ ಹೇಳುತದಪ್ಪ ಜಗವೆಂಬಾ ಗಿಡ ಹುಟ್ಟಿತಣ್ಣ ಹಕ್ಕಿಗಳೆರಡು ಕೂಡೈದಾವೆ ಹಣ್ಣುಗಳೆರಡು ಐದಾವಪ್ಪ ಮೂರು ಮೂರು ಗುಣ ಕೇಳಣ್ಣ ಹಣ್ಣಿನೊಳಗೆ ನಾಲ್ಕು ರಸವಪ್ಪ ಐದು ದೊಡ್ಡ ಗರಿ ಕಾಣಣ್ಣ ಆರು ಬಗೆಯ ಸ್ವರೂಪ ಕೇಳು ಏಳು ಬಗೆಯ ಕೆಂಗಲು ಬಣ್ಣ ಸಣ್ಣ ಗರಿಗಳು ಎಂಟೈದಾವೆ ಅಕ್ಷವು ಅದಕೆ ಒಂಭತ್ತೈತೆ ಎಲೆಗಳು ಹತ್ತು ಐದಾವಪ್ಪ ಒಂದೇ ಹಕ್ಕಿ ಹಣ್ ತಿಂತೈತೆ ಮತ್ತೊಂದ್ಹಕ್ಕಿ ನೋಡುತದಪ್ಪ ಹಣ್ ತಿಂದ್ಹಕ್ಕಿ ಬಡವಾಗೈತೆ ತಿನ್ನದ ಹಕ್ಕಿ ಬಲವಾಗೈತೆ ಒಂದೇ ಕುಲವೆಂದ್ತಿಳಿಯಲುಬೇಡ ತಿಳಿದರೆ ನಿನಗೆ ಕೇಡಾದೀತು ದಾಸತತ್ವದ ಆದಿ ಕಾಣಣ್ಣ ಹಳೇ ವಸ್ತ್ರವ ಬಿಸಾಡಣ್ಣ ಹೊಸವಸ್ತ್ರ ನಿಮದೇವರ್ ಕೊಟ್ಟಾನು ಹಕ್ಕಿಯ ಅರಸ ಹೇಳಿದ ಮಾತು ಉತ್ತಮಮಾರ್ಗವ ಹಿಡಿಯೋ ತಮ್ಮ ಮಾರ್ಗವ ಕಟ್ಟಿ ಸುಲಿಯುತಾರೆ ಮಾರನೆಂಬುವ ಕಳ್ಳೈದಾನೆ ಪುರಂದರನಾದರೂ ಬಿಡುವವನಲ್ಲ ಗುರುವಿನ ಸಂಗತಿ ಹಿಡಿಯೋ ಅಣ್ಣ ಕಿವಿಯೂ ಮೂಗೂ ನಾಲಿಗೆಯಪ್ಪ ಒಂದೊಂದೂ ನಿನ್ನ ಕೊಂದಾವಣ್ಣ ತುರಂಗಮಾತಂಗಪತಂಗ ಕೇಳು ಭೃಂಗಮೀನವು ಹತವಾಯ್ತಣ್ಣ ಜ್ಞಾನಭಕ್ತಿಗಳೆಂಬ ಎರಡು ಮಾರ್ಗಗಳು ಬರುವ ತನಕ ಎರಡೂ ಮನೆಯೊಳಿರಬೇಕಣ್ಣ ದಾನದ ಕೈ ತೋರಿಸಬೇಕಪ್ಪ ಅದರಿಂದ ಭವನದಿ ದಾಟಣ್ಣ ನಿನ್ನ ಯೋಗ್ಯತೆ ತಿಳಿದ ಮೇಲೆ ಪುರಂದರವಿಟ್ಠಲ ಸ್ಥಳ ಕೊಟ್ಟಾನು ||ಜಯವದೆ ಜಯವದೆ ಈ ಮನೆತನಕೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು