ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು

ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು

ಜನುಮ ಜನುಮದಲಿ ಎನಗಿರಲಿ| ಹನುಮ ಭೀಮ ಮಧ್ವ ಮುನಿಗಳ ಸೇವೆಯು |ಪ| ಮಾತ್ಯರೀಷನ ಪ್ರೀತನಾಗಿ ಬಲು | ತಾತನು ಸುಲಭದಿ ವಲಯವನು | ಕೋತಿಯ ರೂಪದಿ ಭೂತಳದೀ ಬಲು | ಖ್ಯಾತಿಯ ಪಡೆದ ರಾಮದೂತನ ಸೇವೆಯು |೧| ಹರನ ಭಕುತ ಜರಾಸಂಧನ ಕಾಯವ | ತರಿದು ಮುರಿದು ಬಲು ಸುಲಭದಲಿ | ಹರಿಗಪರೋಕ್ಷದಿ ಅರ್ಪಣೆ ಮಾಡಿದ | ಕುರುಕುಲ ಪತಿ ಭೀಮನ ಸೇವೆಯು |೨| ಶುದ್ಧ ದ್ವಿಜ ಕುಲದಿ ಉದ್ಧರಿಸಿ | ಅನಿರುದ್ಧಗೆ ಅನುಮತವಾಗಿರುವ | ಸಿದ್ಧಾಂತದ ಪದ್ಧತಿಯನು ತೋರಿದ | ಮಧ್ವಮತದ ತತ್ವದಲ್ಲಿ ಪ್ರಸನ್ನತೆ |೩|
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ