ಜಗದಂತರ್ಯಾಮಿ ನೀನು, ನಿನ್ನ ಬಿಟ್ಟು

ಜಗದಂತರ್ಯಾಮಿ ನೀನು, ನಿನ್ನ ಬಿಟ್ಟು

ಜಗದಂತರ್ಯಾಮಿ ನೀನು, ನಿನ್ನ ಬಿಟ್ಟು ಬಯಲೆಂದು ಬಗೆವನೆ ಬ್ರಹ್ಮಹತ್ಯಗಾರ ಅಗಣಿತಗುಣ ನೀನು, ನಿನ್ನ ಗುಣಗಳಿಂತೆಂದು ಬಗೆವನೆ ಜಗದೊಳಗೆ ಸ್ವರ್ಣಸ್ತೇಯಿ ನೀ ಸೇವ್ಯ ಜಗದೊಡೆಯ ನೀನಿರಲು ಅನ್ಯದೇವರೊಡೆಯನೆಂದು ಬಗೆವನೆ ಜಗದೊಳಗೆ ಮದ್ಯಪಾನಿ ಜಗದ ತಂದೆ ನೀನು , ನಿನ್ನ ದಾಸನೆನ್ನದೆ ನೀನು ತಾನೆಂದು ಬಗೆವವ ಜಗದೊಳಗೆ ಗುರುತಲ್ಪಗ ಇವರ ಸಂಸರ್ಗಿ ತತ್ಸಂಯೋಗಿಗಳು ಇವರು ಪಂಚಮಹಾಪಾತಕಿಗಳು ಇದರ ಕಾರಣದಿಂದ ನೀ ಸತ್ಯ ನೀ ಸತ್ಯ ನೀ ಸೇವ್ಯ ಅಗಣಿತಗುಣಗಣನಿಲಯ ನೀನೆ ತಂದೆ ಜಗದಂತರ್ಯಾಮಿ ನೀನು ನಿನ್ನ ದಾಸರ ಸಂಗ ಸಕಲ ಸುಖಸಂಪದವು ನಂಬಿದೆನೊ ಸಲಹೋ ಪುರಂದರವಿಠಲರೇಯ ಅಯ್ಯಯ್ಯ ಅಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು