Skip to main content

ಚಂದವ ನೋಡಿರೆ

( ರಾಗ ಮುಖಾರಿ. ಅಟ ತಾಳ)

ಚಂದವ ನೋಡಿರೆ ಗೋಕುಲ-
ನಂದನ ಮೂರುತಿಯ ||ಪ||
ಅಂದುಗೆ ಪಾಡಗ ಗೆಜ್ಜೆಯ ಧರಿಸಿ
ಧಿಂಧಿಮಿಕೆಂದು ಕುಣಿಯುವ ಕೃಷ್ಣನ ||ಅ||

ಕೊರಳ ಪದಕ ಹಾರ ಬಿಗಿದು
ತರಳರೆಲ್ಲರ ಕೂಡಿಕೊಂಡು
ಕುರುಳುಗೂದಲು ಅರಳೆಲೆಯ
ಥಳಥಳಿಸುತ ಮೆರೆವ ಕೃಷ್ಣನ ||

ಉಡಿಯ ಘಂಟೆ ಘಳಿಲೆನುತ
ನುಡಿದು ಮೆಲ್ಲನೆ ಪಿಡಿದುಕೊಂಡು
ನಡೆಗೆ ಮಾಲುತ ಸಡಗರದಲಿ
ಬೆಡಗು ಮಾಡಿ ಆಡುವ ರಂಗನ ||

ಬಲು ಅಸ್ಥೈರ್ಯದಿಂದಲಿ
ನಲಿವ ಪುರಂದರವಿಠಲರಾಯ
ಹಲವು ಸುಖವ ನಮಗಿತ್ತು
ಜಲಜಲೋಚನ ಬಾಲಕೃಷ್ಣನ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: