ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ

ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ

ರಾಗ - ಹಿಂದುಸ್ತಾನಿ ತಾಳ - ಕಾಪಿ ಗುರು ಪುರಂದರ ದಾಸರೆ ನಿಮ್ಮ ಚರಣ ಕಮಲವ ನಂಬಿದೆ ||ಪಲ್ಲವಿ|| ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೆ ||ಅನು ಪಲ್ಲವಿ|| ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ ಇಂದಿರೇಶನ ಪಾದ ತೋರಿಸೊ ತಂದೆ ಮಾಡೆಲೊ ಸತ್ಕೃಪೆ ||೧|| ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ ನಾರದಾದಿ ರೂಪದಿಂದಲಿ ತೋರದರ್ಶನ ತೋರಿದೆ ||೨|| ಪುರಂದರಾಲಯ ಘಟ್ಟದೊಳು ನೀ ನಿರುತ ಧನವನು ಗಳಿಸಲು ಪರಮಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ ||೩|| ಪರಮ ನಿರ್ಗುಣ ಮನವನರಿತು ಸರುವ ಸೂರೆಯಗೊಳಿಸಿದೆ ಅರಿತು ಮನದಲಿ ಜರಿದು ಭವಗಳ ತರುಣಿ ಸಹ ಹೊರಹೊರಟನೆ ||೪|| ಅಜಭವಾದಿಗಳರಸನಾದ ವಿಜಯವಿಠಲನ ಧ್ಯಾನಿಪ ನಿಜ ಸುಜ್ಞಾನವ ಕೊಡಿಸಬೇಕೆಂದು ಭಜಿಪೆನೋ ಕೇಳ್ ಗುರುವರ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು