ಗುರುವಿನ ಗುಲಾಮನಾಗುವ

ಗುರುವಿನ ಗುಲಾಮನಾಗುವ

ಪಲ್ಲವಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ ಚರಣ: 1: ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಮುಗಿಸಿದರಿಲ್ಲ ಸಾರ ನ್ಯಾಯ ಕಥೆಗಳ ಕೇಳ್ದರಿಲ್ಲ ಧೀರನಾಗಿ ತಾ ಪೇಳಿದರಿಲ್ಲ 2: ಕೊರಳೊಳು ಮಾಲೆ ಧರಿಸಿದರಿಲ್ಲ ಬೆರಳೊಳು ಜಪಮಣಿ ಎಣಿಸಿದರಿಲ್ಲ ಮರುಳನಾಗಿ ತಾ ಶರೀರಕೆ ಬೂದಿ ಒರೆಸಿಕೊಂಡು ತಾನು ತಿರುಗಿದರಿಲ್ಲ 3: ನಾರಿಯ ಭೋಗ ಅಳಿಸಿದರಿಲ್ಲ ಶರೀರಕೆ ಸುಖ ಬಿಡಿಸಿದರಿಲ್ಲ ನಾರದ ವರದ ಪುರಂದರ ವಿಟ್ಠಲನ ಸೇರಿಕೊಂಡು ತಾ ಪಡೆಯುವ ತನಕ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ