ಗುದ್ದಿದವನೆ ಬಲ್ಲ

ಗುದ್ದಿದವನೆ ಬಲ್ಲ

( ರಾಗ ನಾದನಾಮಕ್ರಿಯ. ಏಕ ತಾಳ) ಗುದ್ದಿದವನೆ ಬಲ್ಲ ಗುದ್ದಿಸಿ ಕೊಂಡವನೆ ಬಲ್ಲ ಸುದ್ದಿಗೆ ಠಾವಿಲ್ಲ ಬೌದ್ಧರೆ ಕೇಳಿರಿ ನೀವೆಲ್ಲ ||ಪ|| ಜೀವದೊರಸೆ ಕೊಂದ , ಹವಣಿಸಿ ನೆವಸದ ನುಂಗಿದ ಬಹು ಭಾಷೆಯ ಕಡಿದ ಶಿವ ಶಿವ ತಾನಾಗೆ ಬಿರಿದ || ಆರಿಗೆ ಮೊರೆಯಿಡಲಿ ಪಿರಿದಭಿಮಾನಕ್ಕೆ ಸಡಲಿ ಭಾರವು ತಿರುಗಿರಲಿ ಕಾರಣ ಇದಿರಲಿ ಇರಲಿ || ಕರ್ಮವು ಛೇದಿಸಿದ, ವೈರಕೆ ಗುರಿಯನೆ ಮಾಡಿದ ಧರ್ಮವ ಭಾವಿಸಿದ ಪುರಂ- ದರವಿಠಲನೆ ನಿಜಬುದ್ಧ ||
ದಾಸ ಸಾಹಿತ್ಯ ಪ್ರಕಾರ
ಬರೆದವರು