ಗುಣವಾಯಿತೆನ್ನ ಭವರೋಗ

ಗುಣವಾಯಿತೆನ್ನ ಭವರೋಗ

( ರಾಗ ಹಿಂದುಸ್ಥಾನಿಕಾಪಿ. ಆದಿತಾಳ) ಗುಣವಾಯಿತೆನ್ನ ಭವರೋಗ ಕೃಷ್ಣನೆಂಬ ವೈದ್ಯನು ದೊರಕಿದನು ಗುಣವಾಗುವವರಿಗೆ ಎಣೆಯಿಲ್ಲ ಗುಣವಂತರಾಗುವರು ಭವದೆಲ್ಲ ||ಪ|| ಸಂತತ ಹರಿಭಕ್ತಿಯನು ಪಾನ ಸಂತತ ಗುರುಭಕ್ತಿ ಮರುಪಾನ ಸಂತತ ಈಶ್ವರನ ಕಠಿನ ಪಥ್ಯ ಸಂತತ ಕೀರ್ತನ ಉಷ್ಣೋದಕ || ಚಂದ್ರೋದಯ ಉಂಟು ಈತನಲ್ಲಿ ಚಿಂತಾಮಣಿಯುಂಟು ಈತನಲ್ಲಿ ಸಂಚಿಯೊಳಗೆ ತುಂಬ ಮಾತ್ರೆಗಳುಂಟು ಚೆನ್ನಾಗಿ ಗುಣ ಮಾಡುವನೀತ || ಗುರು ಸ್ಮರಣೆಯು ಶುಂಠಿಮೆಣಸು ಹರಿದಿವ್ಯನಾಮವು ಸಾರನ್ನ ಗುರುಪಾದಸೇವೆಯು ಸಿಹಿಸಾರು ಹರಿಪಾದೋದಕವೆ ಘೃತವು || ಸಹಸ್ರನಾಮದಿ ತಾ ವಂದ್ಯ ಸಕಲ ಸ್ವತಂತ್ರಕೆ ತಾ ಬಾಧ್ಯ ಹರಿ ಸರ್ವೋತ್ತಮನೆಂಬ ವೈದ್ಯ ಪುರಂದರವಿಠಲನೆ ನಿರವದ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು