ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ

ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ

ಪಂತುವರಾಳಿ ರಾಗ-ಆದಿ ತಾಳ ||ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ||ಪ|| ||ಬಾಯ ಮುಚ್ಚ ಬೇಡಿ ನಾರಾಯಣನ ನೆನೆಯಿರೊ|| ಅ. ಪ|| ||ನಿತ್ಯವಿಲ್ಲ ನೇಮವಿಲ್ಲ | ಮತ್ತೆ ದಾನ ಧರ್ಮವಿಲ್ಲ|| ||ವ್ಯರ್ಥವಾಗಿ ಕೆಡದೆ ಪುರು | ಷೋತ್ತಮನ ನೆನೆಯಿರೊ||೧|| ||ಕದ್ದು ಪುಸಿಯನಾಡಿ ಅವರ | ಬುದ್ಧಿಯಿಂದ ಕೆಡಲು ಬೇಡಿ|| ||ಬುದ್ಧಿವಂತರಾಗಿ ಅನಿ | ರುದ್ಧನನ್ನು ನೆನೆಯಿರೊ||೨|| ||ಭಕ್ತಿ ಕೊಡುವ ಮುಕ್ತಿ ಕೊಡುವ | ಮತ್ತೆ ಸಾಯುಜ್ಯವ ಕೊಡುವ|| ||ಕರ್ತೃ ನಮ್ಮ ಪುರಂದರ | ವಿಠಲನ್ನ ನೆನೆಯಿರೊ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು