Skip to main content

ಗರುವವ್ಯಾತಕೊ ನಿನಗೆ

( ರಾಗ ಕಾಂಭೋಜ. ಝಂಪೆ ತಾಳ)

ಗರುವವ್ಯಾತಕೊ ನಿನಗೆ ಪಾಮರ ಮನುಜನೆ
ಧರೆಯೊಳಗೆ ಕುರುಪತಿಗೆ ಸರಿಯೆನ್ನಬಹುದೆ ||ಪ ||

ಬಲದಲ್ಲಿ ಹಲಧರನೆ ಛಲದಲ್ಲಿ ರಾವಣನೆ
ಕುಲದಲ್ಲಿ ವಸಿಷ್ಟ ಗೌತಮನೆ
ನೆಲೆಯಲ್ಲಿ ಭೃಗು ಮುನಿಯೆ ನೇಮದಲಿ ಗಾಂಗೇಯನೆ
ಒಲುಮೆಯಲಿ ವಾಲ್ಮೀಕಿ ಮುನಿಯೇನೊ ನೀನು ||

ಹಠದಲ್ಲಿ ಪ್ರಹ್ಲಾದನೆ ದಿಟದಲ್ಲಿ ಧ್ರುವರಾಯನೆ
ಶಠರೊಳಗೆ ವಿಶ್ವಾಮಿತ್ರನೆ ನೀನು
ವಿಟರೊಳು ಮನ್ಮಥನೆ ವೀರರೊಳು ಪಾರ್ಥನೆ
ಕುಟಿಲತನದಲಿ ಶಕುನಿಯೆ ನೀನು ||

ದಾನದೊಳು ಕರ್ಣನೆ ಗಾನದೊಳು ನಾರದನೆ
ಜ್ಞಾನದಲಿ ವ್ಯಾಸ ಶುಕಮುನಿಯೆ ನೀನು
ದೀನರಕ್ಷಕ ನಮ್ಮ ಪುರಂದರವಿಠಲನ್ನ
ಧ್ಯಾನದೊಳು ಇದ್ದು ಭವ ನೀಗು ಮನುಜ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: