ಗಡಿಗೆಯ ಮಗಳೆ ಮನೆಗೊಯ್ಯಲಾ

ಗಡಿಗೆಯ ಮಗಳೆ ಮನೆಗೊಯ್ಯಲಾ

( ರಾಗ ಪೀಲು. ಆದಿ ತಾಳ) ಗಡಿಗೆಯ ಮಗಳೆ ಮನೆಗೊಯ್ಯಲಾ ಅದರೊಳು ಅಡಿಗೆಯ ಮಾಡೋದು ಬಲು ಸವಿಯಣ್ಣ ||ಪ|| ಚಿತ್ತಾರ ಜಾಜಿ ಬರೆಯೋದು ಗಡಿಗೆ ಮತ್ತೆ ಮನೆ ಮನೆ ಬೀರೋದು ಗಡಿಗೆ ಮುತ್ತೈದೆರೆಲ್ಲರು ಅರ್ತಿಲಿ ರೈಠಣ ಮಂಡೆಯಲಿ ಹೊತ್ತು ತಾನೊಯ್ವುದು ಗಡಿಗೆ || ಕರದಲಿ ಬಾಗಿನ ಕೊಡುವುದು ಗಡಿಗೆ ವರಮಹಾಲಕ್ಷ್ಮಿಯನೀವುದು ಗಡಿಗೆ ಪರಮ ಕಲಶಕುಲದೇವತೆ ಮೊದಲಾಗಿ ಬರೆದದ್ದು ನಾಗವಲ್ಲಿಯಾ ಗಡಿಗೆ || ಮನೆಯಲ್ಲಿ ಶುಭದಿನವಾಗಲು ಗಡಿಗೆ ಘನವುಳ್ಳ ಶಾಂತಿಯ ಈವೋದು ಗಡಿಗೆ ಅನುದಿನ ಪುರಂದರವಿಠಲನಾ ಮನೋಹರ ಮಾಡೋದು ಶುಭವಾದ ಗಡಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು