ಗಜವದನ ಬೇಡುವೇ

ಗಜವದನ ಬೇಡುವೇ

ಪಲ್ಲವಿ ಗಜವದನ ಬೇಡುವೇ ಗೌರಿ ತನಯ ತ್ರಿಜಗ ವಂದಿತನೇ ಸುಜನರ ಪೊರೆವನೇ ಅನುಪಲ್ಲವಿ ಪಾಶಾಂಕುಶಧರ ಪರಮ ಪವಿತ್ರ ಮೂಷಿಕವಾಹನ ಮುನಿಜನಪ್ರೇಮಾ (ಗಜವದನ) ಚರಣ ಮೋದದಿ ನಿನ್ನಯ ಪಾದವ ತೋರೋ ಸಾಧು ವಂದಿತನೆ ಆದರದಿಂದಲಿ (ಗಜವದನ) ಸರಸಿಜನಾಭ ಶ್ರಿ ಪುರಂದರ ವಿಠಲನ ನಿರುತ ನೆನೆಯುವಂತೆ ದಯ ಮಾಡೋ (ಗಜವದನ)
ದಾಸ ಸಾಹಿತ್ಯ ಪ್ರಕಾರ
ಬರೆದವರು