Skip to main content

ಗಜವದನ ಬೇಡುವೇ

ಪಲ್ಲವಿ

ಗಜವದನ ಬೇಡುವೇ ಗೌರಿ ತನಯ
ತ್ರಿಜಗ ವಂದಿತನೇ ಸುಜನರ ಪೊರೆವನೇ

ಅನುಪಲ್ಲವಿ
ಪಾಶಾಂಕುಶಧರ ಪರಮ ಪವಿತ್ರ
ಮೂಷಿಕವಾಹನ ಮುನಿಜನಪ್ರೇಮಾ (ಗಜವದನ)

ಚರಣ

ಮೋದದಿ ನಿನ್ನಯ ಪಾದವ ತೋರೋ
ಸಾಧು ವಂದಿತನೆ ಆದರದಿಂದಲಿ (ಗಜವದನ)

ಸರಸಿಜನಾಭ ಶ್ರಿ ಪುರಂದರ ವಿಠಲನ
ನಿರುತ ನೆನೆಯುವಂತೆ ದಯ ಮಾಡೋ (ಗಜವದನ)

ದಾಸ ಸಾಹಿತ್ಯ ಪ್ರಕಾರ: 
ಬರೆದವರು: