Skip to main content

ಗಂಡಬಿಟ್ಟ ಗಯ್ಯಾಳಿ ಕಾಣಣ್ಣಗಂಡಬಿಟ್ಟ ಗಯ್ಯಾಳಿ ಕಾಣಣ್ಣ- ಅವಳ

ಕಂಡರೆ ಕಡೆಗಾಗಿ  ತಿರುಗಿಪೋಗಣ್ಣ ||ಪ||ಊರೊಳಗೆ ತಾನು ಪರದೇಶಿಯೆನ್ನುವಳು

ಸಾರುತ ತಿರುಗುವಳು ಮನೆಮನೆಯ

ಕೇರಿಕೇರಿಗುಂಟ ಕೆಲೆಯುತ ತಿರುಗುವಳು

ನಾರಿಯಲ್ಲವೋ ಮುಕ್ಕಮಾರಿ ಕಾಣಣ್ಣ ||೧||ಅತ್ತೆ ಮಾವನ ಕೂಡ ಅತಿಮತ್ಸರವ ಮಾಡಿ

ನೆತ್ತಿಗೆ ಮದ್ದನೆ ಊಡುವಳು

ಸತ್ಯದ ದೇವರ ಸತ್ಯ ನಿಜವಾದರೆ

ಬತ್ತಲೆ ಅಚ್ಚಂಬಿಲೂಡೇನೆಂಬುವಳು ||೨||ಹಲವು ಜನರೊಳು ಕಿವಿಮಾತನಾಡುವಳು

ಹಲವು ಜನರೊಳು ಕಡಿದಾಡುವಳು

ಹಲವು ಜನರೊಳು ಕೂಗಿ ಬೊಬ್ಬೆಯನಿಡುವಳು

ತಳವಾರ ಚಾವಡಿಯಲಿ ಒರಲಿಹಳಣ್ಣ ||೩||

ಪರಪುರುಷರ ಕೂಡಿ ಸರಸವಾಡುತ  ಹೋಗಿ

ನೆರೆದಿದ್ದ ಸಭೆಯಲಿ ಕೆಲೆಯುವಳು

ಮರೆಸಿ ತನ್ನವಗುಣ ಗರತಿಯೆಂದು ಮೆರೆವಳು

ಕರಿರೂಪದವಳ ನೀ ಕೆಣಕದಿರಣ್ಣ ||೪||ಏಸು ಗೃಹಗಳೆಂದು ಎಣಿಸಿ ನೋಡಿಬಂದು

ಬೇಸರದೆ ಜನಕೆ ಹೇಳುವಳು

ಲೇಸಾಗಿ ಪುರಂದರವಿಠಲನು ಹೇಳಿದ

ಹೇಸಿ ತೊತ್ತನು ನೀ ಕೆಣಕದಿರಣ್ಣ ||೫||

 

ದಾಸ ಸಾಹಿತ್ಯ ಪ್ರಕಾರ: 
ಬರೆದವರು: